ದೇವರು, ಮನುಷ್ಯನು ಹಾಗೂ ಭೂಮಿಯ ಮೇಲೆ ಏನು ಸಂಭವಿಸುತ್ತಿದೆಯೆಂಬುದರ ಕುರಿತು ಪ್ರಶ್ನೆಗಳು

ವಿಶ್ವಾದ್ಯಂತ ಸಾಂಕ್ರಾಮಿಕದ ಮಧ್ಯೆ ಈ ದಿನಗಳಲ್ಲಿ ಆತ್ಮಿಕ ಕಾಳಜಿಗಳು ಮತ್ತು ಪ್ರಶ್ನೆಗಳ ಕುರಿತು ಸತ್ಯವೇದದಿಂದ ಕೆಲವು ಒಳನೋಟಗಳನ್ನು ಕೆಳಗೆ ಹಂಚಿಕೊಳ್ಳಲು ನಾವು ಬಯಸುತ್ತೇವೆ, ಉದಾಹರಣೆಗೆ: ದೇವರು ಏನು ಮಾಡುತ್ತಿದ್ದಾನೆ? ನಾನು ಏನು ಮಾಡಬೇಕು? ಈ ಸಂಗತಿಗಳು ಏಕೆ ಸಂಭವಿಸುತ್ತಿವೆ? ಭವಿಷ್ಯದಲ್ಲಿ ಏನು ಬರಲಿದೆ? ಈ ಅಭೂತಪೂರ್ವ ಪರಿಸ್ಥಿತಿಯ ಮಧ್ಯೆ ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಹೇಗೆ ವರ್ತಿಸಬೇಕು ಎಂದು ತಿಳಿಯಲು ಅರಸುವಲ್ಲಿ ಇವುಗಳು ನಿಮಗೆ ಸಹಾಯಕವಾಗಿರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ.

ಲೇಖನಗಳು

ಎಂದಿಗೂ ವಿಫಲವಾಗದ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಹಿಡಿಯಬಹುದು?

ಎಂದಿಗೂ ವಿಫಲವಾಗದ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಹಿಡಿಯಬಹುದು?

ನಾವು ನಮ್ಮ ಜೀವನವನ್ನು ಜೀವಿಸುತ್ತಿರುವಾಗ, ನಾವೆಲ್ಲರೂ ಅನಾರೋಗ್ಯ, ವೃದ್ಧತೆ ಮತ್ತು ಅಂತಿಮವಾಗಿ ಮರಣವನ್ನು ಅನುಭವಿಸುತ್ತೇವೆ. ನಾವು ಸತ್ತ ಮೇಲೆ ಏನೂ ಉಳಿಯುವುದಿಲ್ಲ. ಅತ್ಯಂತ ಯಶಸ್ವಿ ಜನರು ಪರಂಪರೆಯನ್ನು ಬಿಟ್ಟು ಹೋಗಬಹುದಾದರೂ, ಒಮ್ಮೆ ಅವರು ಇನ್ನು  ಜೀವಂತವಾಗಿರದಿದ್ದಾಗ, ಹೊಂದಿರುವುದಾದರೂ ಏನು? ಈ ಹಂತದಲ್ಲಿ ಸಾಧಿಸಿದ ಮತ್ತು ಸಂಗ್ರಹಿಸಿದ ಎಲ್ಲವೂ ವ್ಯರ್ಥವಾಗಿದೆ. ಮಾನವ ಜೀವನವು ಹತಾಶವಾಗಿದೆ ಎಂದು ನಾವು ತೀರ್ಮಾನಿಸಬೇಕು, ಆದರೂ ನಾವೆಲ್ಲರೂ ಇನ್ನೂ ನಿರೀಕ್ಷೆಯನ್ನು ಹುಡುಕಾಡುತ್ತಿದ್ದೇವೆ. ಪ್ರತಿಯೊಂದು ಅರ್ಹತೆಯಲ್ಲಿಯೂ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಿರುವ ಶಾಶ್ವತವಾಗಿ ಸುರಕ್ಷಿತನಾಗಿರುವವನಲ್ಲಿ ನಮ್ಮ ನಿರೀಕ್ಷೆಯನ್ನು ಇಡಬಲ್ಲ ಒಬ್ಬ ವ್ಯಕ್ತಿಯು ಇದ್ದಾನೆ - ಅದು  ದೇವರು. ಹೇಗೆ ದೇವರು ನಿಮ್ಮ ನಿರೀಕ್ಷೆಯಾಗಿರಬಹುದು ಎಂದು ತಿಳಿದುಕೊಳ್ಳಿ.

ತೊಂದರೆ ಮತ್ತು ಸಂಕಟದಿಂದ ರಕ್ಷಿಸಲ್ಪಡಬೇಕೆಂದು ಕರ್ತನ ನಾಮವನ್ನು ಕರೆಯುವುದು

ತೊಂದರೆ ಮತ್ತು ಸಂಕಟದಿಂದ ರಕ್ಷಿಸಲ್ಪಡಬೇಕೆಂದು ಕರ್ತನ ನಾಮವನ್ನು ಕರೆಯುವುದು

ತೊಂದರೆ ಅಥವಾ ಸಂಕಟದ ಸಂದರ್ಭಗಳಲ್ಲಿ ಜನರು ಆಗಾಗ್ಗೆ ಗೊಂದಲಕ್ಕೊಳಗಾಗುತ್ತಾರೆ ಅಥವಾ ಹೇಗೆ ಪ್ರತಿಕ್ರಿಯಿಸಬೇಕು ಎಂದು ಸ್ಪಷ್ಟವಾಗಿರುವದಿಲ್ಲ. ಅಂತಹ ಸಮಯದಲ್ಲಿ ಅನೇಕರು ಪ್ರಾರ್ಥನೆಯೆಡೆಗೆ ತಿರುಗುತ್ತಾರೆ, ಆದರೆ ನಾವು ಏನು ಪ್ರಾರ್ಥಿಸುತ್ತೇವೆ, ಮತ್ತು ಹೇಗೆ ಪ್ರಾರ್ಥಿಸುತ್ತೇವೆ? ಸತ್ಯವೇದದಲ್ಲಿ ದಾಖಲಾಗಿರುವಂತೆ ಕರ್ತನ ನಾಮವನ್ನು ಕರೆಯುವುದು ವಿಶೇಷವಾಗಿ ಒಂದು ಸರಳ ಮತ್ತು ಸಹಾಯಕವಾದ ಮಾರ್ಗವಾಗಿದೆ (ರೋಮಾ. 10:13). ಕರೆಯುವುದು ಒಂದು ನಿರ್ಧಿಷ್ಟ ರೀತಿಯ ಪ್ರಾರ್ಥನೆಯಾಗಿದೆ; ಇದು ಕೇವಲ ವಿನಂತಿ ಅಥವಾ ಸಂವಹನವಲ್ಲ ಆದರೆ ಆತ್ಮಿಕ ಉಸಿರಾಟದ ಒಂದು ವ್ಯಾಯಾಮವಾಗಿದ್ದು ಅದು ನಮ್ಮನ್ನು ಜೀವಿಸುವಂತೆ ಮಾಡುತ್ತದೆ ಮತ್ತು ನಮ್ಮ ಆತ್ಮಕ ಶಕ್ತಿಯನ್ನು ಕಾಪಾಡುತ್ತದೆ.

ತಿಳುವಳಿಕೆಯನ್ನು ಮೀರಿದ ಶಾಂತಿಯನ್ನು ಹೇಗೆ ನಾವು ಹೊಂದಬಹುದು?

ತಿಳುವಳಿಕೆಯನ್ನು ಮೀರಿದ ಶಾಂತಿಯನ್ನು ಹೇಗೆ ನಾವು ಹೊಂದಬಹುದು?

ನಮ್ಮ ಬಾಹ್ಯ ಪರಿಸರವನ್ನು ನಿಯಂತ್ರಿಸಲು ಪ್ರಯತ್ನಿಸುವದರ ಮೂಲಕ ಶಾಂತಿಯನ್ನು ಹೊಂದುವುದು ಏಕೈಕ ಮಾರ್ಗವೆಂದು ನಮ್ಮಲ್ಲಿ ಅನೇಕರು ಭಾವಿಸುತ್ತಾರೆ. ಹೇಗಿದ್ದರೂ, ನಾವು ನಿಜವಾಗಿಯೂ ನಮ್ಮ ಪರಿಸರದಿಂದ ನಿಯಂತ್ರಿಸಲ್ಪಡುವವರಾಗಿದ್ದೇವೆ. ಬಾಹ್ಯ ಪರಿಸರವು ಶಾಂತವಾಗಿರುವದಕ್ಕಾಗಿ ನಾವು ನಿರೀಕ್ಷಿಸಬಹುದು, ಆದರೆ ಬದಲಾಗಿ, ನಮ್ಮ ಜೀವನವು ಶಾಂತಿಯನ್ನು ಕಂಡುಹಿಡಿಯಲು ಮತ್ತು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಗಳಿಂದ ತುಂಬಿರುತ್ತದೆ. ಮತ್ತೊಂದೆಡೆ, ಸತ್ಯವೇದವು ಸಂಪೂರ್ಣವಾಗಿ ಒಂದು ವಿಭಿನ್ನ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ; ಈ ಜೀವನವೇ ನಮ್ಮ ಪರಿಸರವನ್ನು ಲೆಕ್ಕಿಸದೆ ಉನ್ನತವಾದ, ಆಳವಾದ, ನಿತ್ಯವಾದ, ಹಾಗೂ ಮೀರಿದ ಶಾಂತಿಯನ್ನು ತರುತ್ತದೆ.


ಇತರರೊಂದಿಗೆ ಹಂಚಿಕೊಳ್ಳಿ