ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿಕೊಡುವೆನು

ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿಕೊಡುವೆನು

ಕರ್ತನಾದ ಯೇಸು ಭೂಮಿಯ ಮೇಲೆ ಇದ್ದಾಗ, ಆತನು ಅನೇಕ ಸಾರಿ ಈ ಆಹ್ವಾನಿಸುವ ಎಂಬ ಪದವನ್ನು ಉಚ್ಚರಿಸುತ್ತಿದ್ದನು: ಬನ್ನಿರಿ. “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು”(ಮತ್ತಾಯ 11:28). “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ...ದೇವರ ರಾಜ್ಯವು ಅಂಥವರದೇ”(ಮಾರ್ಕ. 10:14)ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ” (ಯೋಹಾನ 7:37). ಕರ್ತನು ಯಾವಾಗಲೂ ವಿಶ್ರಾಂತಿಗಾಗಿಯೂ ಜೀವಕ್ಕಾಗಿಯೂ ಆತನ ಬಳಗೆ ಬರಲು ನಮ್ಮನ್ನು ಆಹ್ವಾನಿಸುತ್ತಾನೆ.

ಕೇವಲ ಕರ್ತನು ತನ್ನ ಕಡೆಯಿಂದ ಕೃಪಾಭರಿತನಾಗಿ ನಮ್ಮನ್ನು ಬರಲು ಕೇಳಿಕೊಳ್ಳುವುದಿಲ್ಲ; ಆದರೆ ನಾವು, ನಮ್ಮ ಕಡೆಯಿಂದ, ನಾವು ಶ್ರಮಿಸುವ ಅತೀವ ಹೊರೆಗಳ ನಿಮಿತ್ತ ಬರಲು ಅತ್ಯಗತ್ಯವಾಗಿದೆ. ನಮ್ಮದು ಒಂದು ಅನನ್ಯವಾದ ಆತಂಕದ ಯುಗವಾಗಿದ್ದು-ನೈಸರ್ಗಿಕ ವಿಪತ್ತುಗಳ ಕುರಿತ ಆಂತಕ, ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಆತಂಕ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಅವ್ಯವಸ್ಥೆ, ಭಯೋತ್ಪಾದನೆಯ ಬೆದರಿಕೆಯಿಂದ ಉಂಟಾಗುವ ಆತಂಕ, ಅನಿಶ್ಚಿತ ಆರ್ಥಿಕತೆಯ ಮೇಲಿನ ಆತಂಕ. ನಾವು ಉದ್ಯೋಗದಲ್ಲಿರಲು ಸಾಧ್ಯವಾಗುವುದೋ ಎಂದು ನಾವು ಆಶ್ಚರ್ಯಪಡುತ್ತೇವೆ. ನಮಗೆ ಸಾಕಾಗವಷ್ಟು ಆಹಾರ ಮತ್ತು ಔಷಧಿ ಸಿಗುತ್ತದೋ ಎಂದು ನಾವು ಆಶ್ಚರ್ಯಪಡುತ್ತೇವೆ. ನಮ್ಮ ಮಕ್ಕಳು ಯಾವ ಪ್ರಕಾರದ ಜಗತ್ತಿಗೆ ಬಾಧ್ಯಸ್ಥರಾಗುವರೆಂದು ನಾವು ಆಶ್ಚರ್ಯಪಡುತ್ತೇವೆ. ಓ, ನಾವು ಬರುವುದಕ್ಕೂ ಅನೇಕ ಭಾರಗಳಿಂದಲೂ ಆತಂಕಗಳಿಂದಲೂ ನಮ್ಮನ್ನು ನಾವು ಮುಕ್ತಗೊಳಿಸಲ್ಪಡುವುದಕ್ಕೂ ಎಷ್ಟು ಅಗತ್ಯವಿದೆ!

ಪಾಪದ ಸಮಸ್ಯೆಯದ ನಿಮಿತ್ತದಿಂದಲೂ ನಮಗೆ ಬರುವ ಅತ್ಯಗತ್ಯವಿದೆ. ಈ ವಿಶ್ವದಲ್ಲಿ ಪವಿತ್ರ ದೇವರು ಇದ್ದಾನೆಂದೂ, ನಾವು ಸರಿಯಾದ ಮತ್ತು ನೈತಿಕ ಜೀವನವನ್ನು ಜೀವಿಸಬೇಕೆಂದೂ ನಮ್ಮ ಮನಸ್ಸಾಕ್ಷಿಯಲ್ಲಿ ನಾವು ತಿಳಿದಿದ್ದೇವೆ. ಆದರೆ ನಮಗೆ ಒಂದು ಸಮಸ್ಯೆವಿದ್ದು-ನಾವು ಅದನ್ನು ಮಾಡಲಾರೆವು. ನಾವೆಲ್ಲರು ಎಣಿಸಲಾರದಷ್ಟು ದೇವರ ವಿರುದ್ಧ ಪಾಪಮಾಡಿದ್ದೇವೆ, ಮನುಷ್ಯರ ವಿರುದ್ಧ ಪಾಪಮಾಡಿದ್ದೇವೆ. ಹೀಗಿರಲಾಗಿ ನಾವು ಬರಲು ಹೇಗೆ ಸಾಧ್ಯ? ನಾವು ಬರಲು ಯೇಸು ಏನನ್ನು ಬಯಸುತ್ತಾನೆ?

ಒಂದು ಮಾತಿನಲ್ಲಿ ಹೇಳುವುದಾದರೆ-ಏನೂ ಇಲ್ಲ! ಖಂಡಿತವಾಗಿಯೂ ಯೇಸು ಏನನ್ನು ಬಯಸುವದಿಲ್ಲ, ಯಾಕೆಂದರೆ ಆತನು ಈಗಾಗಲೇ ನಮಗೆ ಬರಲು ಪೂರ್ಣ ವ್ಯವಸ್ಥೆಯನ್ನು ಮಾಡಿದ್ದಾನೆ. ಸತ್ಯವೇದವು, “ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ [ಯೇಸುವಿನ] ಮೇಲೆ ಹಾಕಿದನು” ಎಂದು ಹೇಳುತ್ತದೆ (ಯೆಶಾ. 53:6). ಆತನು ನಮ್ಮ ಪಾಪಗಳಿಗೆ ಸಂಪೂರ್ಣ ಶಿಕ್ಷೆಯನ್ನು ಹೊತ್ತದ್ದರಿಂದ ನಮ್ಮಿಂದ ಏನನ್ನೂ ಬಯಸುವದಿಲ್ಲ. ಯೇಸು ತನ್ನ ರಕ್ತವನ್ನು ಸುರಿಸಿ ಮತ್ತು ಅದನ್ನೆಲ್ಲಾ ನಮಗಾಗಿ ಹೊತ್ತುಕೊಂಡದ್ದರಿಂದ ನಾವು ಇನ್ನೂ ನಮ್ಮ ಪಾಪಗಳ ದಂಡವನ್ನು ಹೊರುವದಿಲ್ಲ! ಆತನು ಸಾಲವನ್ನು ತೆತ್ತಿದ್ದಾನೆ, ಆದ್ದರಿಂದ ನಾವು ಬಂದಾಗ, ನಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ನಾವು ಭರವಸೆಯುಳ್ಳವರಾಗಿರಲು ಸಾಧ್ಯ. ಬಳಿಕ ಆತನು ಮರಣದಿಂದ ಪುನರುತ್ಥಾನವನ್ನು ಹೊಂದಿ ಬದುಕಿಸುವ ಆತ್ಮನಾದನು (1 ಕೊರಿ. 15:45). ಹೀಗೆ ಆತನು ನಮ್ಮೊಳಗೆ ಬಂದು ನಮ್ಮ ಆಂತರ್ಯದ ಶಾಂತಿಯೂ ವಿಶ್ರಾಂತಿಯೂ ಆಗಬಹುದು.

ಕರ್ತನು ಸತ್ಕಾರ್ಯಗಳನ್ನು ಕೇಳುವದಿಲ್ಲ; ಆತನು ಸದ್ಗುಣಗಳನ್ನು ಕೇಳುವದಿಲ್ಲ; ಆತನು ಯೋಗ್ಯತೆಯ ಪುರಾವೆಗಳನ್ನು ಕೇಳುವದಿಲ್ಲ-ಆತನು ಕೇವಲಬನ್ನಿ” ಎಂದು ಹೇಳುತ್ತಾನೆ. ಬರುವವರಿಗೆ, ಆತನು ಷರತ್ತುರಹಿತ ವಾಗ್ದಾನವನ್ನು ನೀಡುತ್ತಾನೆ: “ನನ್ನ ಬಳಿಗೆ ಬರುವವನನ್ನು ನಾನು ತಳ್ಳಿ ಬಿಡುವದೇ ಇಲ್ಲ” (ಯೋಹಾನ 6:37). ನಾವೀಗ ಮಾಡಬೇಕಾಗಿರುವುದೆಲ್ಲವು ಆತನ ಬಳಿಗೆ ಬರುವುದಷ್ಟೆ. ಬರುವುದರ ಅರ್ಥವಾದರೇನು? ಬರುವುದು ಕರ್ತನಿಗೆ ಹತ್ತಿರವಾಗುವುದಾಗಿದೆ. ಬರುವುದು ಆತನ ನಾಮವನ್ನು ಕರೆಯುವದಾಗಿದೆ. ಬರುವುದು ಆತನೊಳಗೆ ನಂಬುವುದು ಮತ್ತು ಆತನನ್ನು ಸ್ವೀಕರಿಸುವುದು ಆಗಿದೆ.

      ನೀವು ಈ ಕ್ಷಣ ಇದ್ದ ಹಾಗೇಯೇ ಬರಲು ಕರ್ತನು ನಿಮಗಾಗಿ ಕಾಯುತ್ತಿದ್ದಾನೆ. ನಿಮ್ಮ ಪ್ರಸ್ತುತ ಪಾಪಗಳೊಂದಿಗೆ ಬನ್ನಿ. ನಿಮ್ಮ ಪ್ರಸ್ತುತ ಭಯಗಳೊಂದಿಗೆ ಬನ್ನಿ. ನೀವು ಇದ್ದ ಹಾಗೆಯೇ ಬನ್ನಿ. ನಿಮ್ಮನ್ನು ಸುಧಾರಿಸಿಕೊಳ್ಳುವದಕ್ಕಾಗಿ ಕಾಯಬೇಡಿ-ಆ ದಿನವು ಎಂದಿಗೂ ಬರುವುದಿಲ್ಲ. ನಮ್ಮ ಪರವಾಗಿ ಯೆಸುವಿನ ಮರಣವು ನಮ್ಮ ಪ್ರತಿಯೊಂದು ಕೊರತೆಯನ್ನು ತುಂಬಿದೆ. ಕಾಯುವ ಅಗತ್ಯವಿಲ್ಲ-ಕೇವಲ ಬನ್ನಿ. ನೀವು ಬಂದರೆ, ನೀವು ಯೇಸುವಿನೊಳಗೆ ನಂಬಿದರೆ, ನೀವು ನಿಮ್ಮ ಹೃದಯವನ್ನು ತೆರೆದು, ಆತನನ್ನು ಕರೆದರೆ, ಆತನು ನಿಮ್ಮನ್ನು ಸ್ವೀಕರಿಸುವನು. ಆತನ ವಾಗ್ದಾನವು ಎಂದೆಂದಿಗೂ ನಿಜವಾಗಿದೆ. “ನನ್ನ ಬಳಿಗೆ ಬರುವವನನ್ನು ನಾನು ತಳ್ಳಿ ಬಿಡುವದೇ ಇಲ್ಲ.” ಕೇವಲ ಬನ್ನಿ.

“ಕರ್ತನಾದ ಯೇಸುವೇ, ನಾನು ಪಾಪಿಯೆಂದು ನಾನು ಅರಿಕೆಮಾಡುತ್ತೇನೆ, ನಾನು ಭಯ ಮತ್ತು ಸಂಶಯವನ್ನು ಹೊಂದಿದ್ದೇನೆಂದು ನಾನು ಅರಿಕೆಮಾಡುತ್ತೇನೆ, ಆದರೆ ನಾನೀಗ ನಿನ್ನ ಬಳಿಗೆ ಬರುತ್ತೇನೆ, ನಿನ್ನ ಅಮೂಲ್ಯವಾದ ರಕ್ತದ ಮೂಲಕ ನನ್ನ ಪಾಪಗಳಿಂದ ನನ್ನನ್ನು ಶುದ್ಧಿಗೊಳಿಸಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ, ನೀನು ನನ್ನನ್ನು ಎಂದಿಗೂ ತಳ್ಳಿ ಬುಡುವದೇ ಇಲ್ಲವೆಂದು ನಾನು ನಿನ್ನ ವಾಗ್ದಾನವನ್ನು ನಂಬುತ್ತೇನೆ. ಆದ್ದರಿಂದ ನಾನು ಇದ್ದ ಹಾಗೆಯೇ, ನಿನ್ನ ಬಳಿಗೆ ಬರುತ್ತೇನೆ ಮತ್ತು ನೀನು ನನ್ನನ್ನು ಸ್ವೀಕರಿಸುವಿಯೆಂದು ನಿನ್ನ ವಾಕ್ಯದಿಂದ ನಾನು ತಿಳಿದಿದ್ದೇನೆ. ನನ್ನೊಳಗೆ ಬರಬೇಕೆಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ. ಕರ್ತನಾದ ಯೇಸುವೇ, ನೀನು ನನ್ನ ವಿಶ್ರಾಂತಿಯಾಗಿರಬೇಕೆಂದು ನಾನು ನಿನ್ನ ಬಳಿಗೆ ಬರುತ್ತೇನೆ.”


ಇತರರೊಂದಿಗೆ ಹಂಚಿಕೊಳ್ಳಿ