ತೊಂದರೆ ಮತ್ತು ಸಂಕಟದಿಂದ ರಕ್ಷಿಸಲ್ಪಡಬೇಕೆಂದು ಕರ್ತನ ನಾಮವನ್ನು ಕರೆಯುವುದು

ತೊಂದರೆ ಮತ್ತು ಸಂಕಟದಿಂದ ರಕ್ಷಿಸಲ್ಪಡಬೇಕೆಂದು ಕರ್ತನ ನಾಮವನ್ನು ಕರೆಯುವುದು

ತೊಂದರೆ ಅಥವಾ ಸಂಕಟದ ಸಂದರ್ಭಗಳಲ್ಲಿ ಜನರು ಆಗಾಗ್ಗೆ ಗೊಂದಲಕ್ಕೊಳಗಾಗುತ್ತಾರೆ ಅಥವಾ ಹೇಗೆ ಪ್ರತಿಕ್ರಿಯಿಸಬೇಕು ಎಂದು ಸ್ಪಷ್ಟವಾಗಿರುವದಿಲ್ಲ. ಅಂತಹ ಸಮಯದಲ್ಲಿ ಅನೇಕರು ಪ್ರಾರ್ಥನೆಯೆಡೆಗೆ ತಿರುಗುತ್ತಾರೆ, ಆದರೆ ನಾವು ಏನು ಪ್ರಾರ್ಥಿಸುತ್ತೇವೆ, ಮತ್ತು ಹೇಗೆ ಪ್ರಾರ್ಥಿಸುತ್ತೇವೆ? ಸತ್ಯವೇದದಲ್ಲಿ ದಾಖಲಾಗಿರುವಂತೆ ಕರ್ತನ ನಾಮವನ್ನು ಕರೆಯುವುದು ವಿಶೇಷವಾಗಿ ಒಂದು ಸರಳ ಮತ್ತು ಸಹಾಯಕವಾದ ಮಾರ್ಗವಾಗಿದೆ (ರೋಮಾ. 10:13). ಕರೆಯುವುದು ಒಂದು ನಿರ್ಧಿಷ್ಟ ರೀತಿಯ ಪ್ರಾರ್ಥನೆಯಾಗಿದೆ; ಇದು ಕೇವಲ ವಿನಂತಿ ಅಥವಾ ಸಂವಹನವಲ್ಲ ಆದರೆ ಆತ್ಮಿಕ ಉಸಿರಾಟದ ಒಂದು ವ್ಯಾಯಾಮವಾಗಿದ್ದು ಅದು ನಮ್ಮನ್ನು ಜೀವಿಸುವಂತೆ ಮಾಡುತ್ತದೆ ಮತ್ತು ನಮ್ಮ ಆತ್ಮಕ ಶಕ್ತಿಯನ್ನು ಕಾಪಾಡುತ್ತದೆ.

“ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು. ನೀನು ನನ್ನ ಧ್ವನಿಯನ್ನು ಕೇಳಿದಿ; (ನನ್ನ ನಿಟ್ಟುಸುರಿಗೂ ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ).” ಪ್ರಲಾ. 3:55-56

ಮೇಲಿನ ವಚನಗಳಲ್ಲಿ ಕರ್ತನನ್ನು (ಯೆಹೋವನನ್ನು) ಕರೆಯುವುದು ಆತನನ್ನು ಕೂಗುವದಾಗಿದ್ದು, ಆತ್ಮಿಕ ಗಾಳಿಯನ್ನು ಉಸಿರಾಡುವದಾಗಿದೆ ಎಂದು ಯೆಎರಮೀಯನು ಹೇಳುತ್ತಾನೆ. ಈ ರೀತಿಯಾಗಿ ಕರ್ತನ ನಾಮವನ್ನು ಕರೆಯುವುದು ನಮ್ಮ ತಒಂದರೆ ಮತ್ತು ಸಂಕಟದಿಂದ ತಕ್ಷಣ ನಮ್ಮನ್ನು ಆಂತರಿಕವಾಗಿ ರಕ್ಷಿಸುತ್ತದೆ.

ಕೀರ್ತ. 118:5ರಲ್ಲಿ, “ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿ ನನ್ನನ್ನು ವಿಶಾಲಸ್ಥಳದಲ್ಲಿ ಇಟ್ಟನು.” ಮತ್ತು ಕೀರ್ತ. 50:15ರಲ್ಲಿ, “ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ,” ಎಂದು ಕೂಡಾ ಕೀರ್ತನೆಗಾರನು ಸಾಕ್ಷಿಕರಿಸುತ್ತಾನೆ. ಈ ವಚನಗಳು ತೊಂದರೆ ಮತ್ತು ಸಂಕಟದಿಂದ ವಿಮೋಚನೆಯನ್ನು ಅನುಭವಿಸಲು ಕರೆಯುವುದು ಒಂದು ಮಾರ್ಗವೆಂದು ಒತ್ತಿಹೇಳುತ್ತವೆ.

ಕರ್ತನ ನಾಮವನ್ನು ಕರೆದು ಆತನಿಗೆ ಮೊರೆಯಿಡುವ ಇನ್ನೊಂದು ಕಾರಣ ಇಕ್ಕಟ್ಟುಗಳಿಂದ (ಕೀರ್ತನೆ 18:6; 118:5), ಕಷ್ಟದಿಂದ (ಕೀರ್ತನೆ. 50:15; 86:7; 81:7). ಮತ್ತು ದುಃಖ ವೇದನೆಯಿಂದ (ಕೀರ್ತನೆ 116:3-4) ಬಿಡುಗಡೆ ಹೊಂದುವದಾಗಿದೆ. ಕರ್ತನ ನಾಮವನ್ನು ಕರೆದು ಮೊರೆಯಿಡುವುದನ್ನು ವಿರೋಧಿಸಿ ವಾದಮಾಡಿದ ಜನರು ಸ್ವತಃ ತಾವೇ ಇಕ್ಕಟ್ಟಿನಲ್ಲಿ ಅಥವಾ ಅಸ್ವಸ್ಥ ಕಾಲದಲ್ಲಿ ಕರ್ತನ ನಾಮವನ್ನು ಕರೆದು ಮೊರೆಯಿಟ್ಟಿದ್ದಾರೆ. ಇಕ್ಕಟ್ಟಿನಲ್ಲಿಲ್ಲದ ಕಾಲದಲ್ಲಿ ನಾವು ಅದಕ್ಕೆ ವಿರೋಧವಾಗಿ ವಾದಿಸಬಹುದು. ಹೇಗಿದ್ದರೂ, ಇಕ್ಕಟ್ಟು, ಕಷ್ಟ, ಸಂಕಟಗಳು ಬಂದಾಗ, ಕರ್ತನ ನಾಮವನ್ನು ಕರೆಯಲು ನಮಗೆ ಯಾರು ಹೇಳಬೇಕಾಗಿಲ್ಲ. ನಾವೇ ಸ್ವಯಂಸ್ಫೂರ್ತಿಯಾಗಿ ಕರೆಯುತ್ತೇವೆ.
ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ. 1, ಪುಟ. 38-39*

ಕರ್ತನ ನಾಮವನ್ನುನಕರೆಯುವ ಅಭ್ಯಾಸವು ಹೊಸದೆನಲ್ಲ. ನಾವು ಅದನ್ನು ಸತ್ಯವ್ಭೆದದಾದ್ಯಂತ ಕಾಣುತ್ತೇವೆ (ಆದಿ. 4:25, ಆದಿ. 12:8, ಅ. ಕೃ. 22:16, 2 ತಿಮೊ. 2:22). ಆದರೆ ಈ ಅಭ್ಯಾಸವು ಶತಮಾನಗಳಿಂದ ಕಳೆದುಹೋಗಿದೆ ಮತ್ತು ಕೆಲವರು ಇದನ್ನು ತಪ್ಪಾಗಿ ಗ್ರಹಿಸಿದ್ದಾರೆ. ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ, ಕರ್ತನ ನಾಮವನ್ನು ಕರೆಯುವ ಅಭ್ಯಾಸದ ಮೂಲಕ, ಆರಂಭಿಕ ಕ್ರೈಸ್ತರನ್ನು ಸುಲಭವಾಗಿ ಗುರುತಿಸಲ್ಪಡುವುದು ಅವರಲ್ಲಿ ಬಹಳ ಸಾಮಾನ್ಯವಾಗಿತ್ತು (ಅ. ಕೃ. 9:14, 21). ನಾವು ತೊಂದರೆಯ ಮತ್ತು ಸಂಕಟದ ಸಮಯದ ಮೂಲಕ ಹಾಯ್ದು ಹೋಗುತ್ತಿರಲಿ ಅಥವಾ ಹೋಗದಿರಲಿ, ಪ್ರತಿಯೊಂದು ಪರಿಸ್ಥಿತಿಯಲ್ಲೂ ಪ್ರತಿಯೊಂದು ಸ್ಥಳದಲ್ಲೂ ನಾವು ಕರ್ತನ ನಾಮವನ್ನು ಕರೆಯುವ ಅಭ್ಯಾಸವನ್ನು ಮಾಡಬಹುದು (1 ಕೊರಿ. 1:2).

ಅ. ಕೃ. 2:21, “ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ“ ಎಂದು ಹೇಳುತ್ತದೆ.

ನೀವು ಇದೀಗ ರಕ್ಷಿಸಲ್ಪಡಬೇಕೆಂದು ಬಯಸಿದರೆ, ಕರ್ತನಾದ ಯೇಸುವಿನ ಹೆಸರನ್ನು ನಾ,ವನ್ನು ಕರೆದು ಆತನಿಗೆ ಹೇಳಿ:

ಓ ಕರ್ತನಾದ ಯೇಸುವೇ! ಓ ಕರ್ತನಾದ ಯೇಸುವೇ! ಓ ಕರ್ತನಾದ ಯೇಸುವೇ! ನಿನ್ನ ನಾಮ ಕರೆಯುವದನ್ನು ನನಗೆ ಬಹಳ ಸರಳಮಾಡಿದಕ್ಕಾಗಿ ಧನ್ಯವಾದಗಳು. ನನ್ನ ಧ್ವನಿಯನ್ನು ಕೇಳಿದಕ್ಕಾಗಿ ಧನ್ಯವಾದಗಳು. ಬಂದು ನನ್ನನ್ನು ರಕ್ಷಿಸು. ನಾನು ನಿನಗೆ ತೆರೆದುಕೊಳ್ಳುತ್ತೇನೆ. ನಾನು ನಿನ್ನ ನಾಮವನ್ನು ಕರೆಯುತ್ತೇನೆ, ಓ ಕರ್ತನಾದ ಯೇಸುವೇ! ನಾನು ನಿನ್ನನ್ನು ಪ್ರೀತಿಸುತ್ತೇನೆ.

ಇದಲ್ಲದೆ, ರೋಮಾಪ್ಮರದವರಿಗೆ 10:12ರಲ್ಲಿ, ಯೇಸುವು ಎಲ್ಲರಿಗೂ ಕರ್ತನಾಗಿದ್ದಾನೆ ಮತ್ತು ಆತನ ನಾಮವನ್ನು ಕರೆಯುವವರೆಲ್ಲರಿಗೂ ಸಮೃದ್ಧಿಯಾಗಿದ್ದಾನೆ. ಕರ್ತನ ನಾಮವನ್ನು ಕರೆಯುವ ಮೂಲಕ ಆತನು ಎಷ್ಟು ಸಮೃದ್ಧನಾಗಿದ್ದಾನೆಂದು ನಾವು ನಿರಂತವಾಗಿ ಅನುಭವಿಸಬಹುದು. ನಮ್ಮ ದೈಹಿಕ ಉಸಿರಾಟದಂತೆಯೇ, ಕರೆಯುವ್ಯದು ನಮ್ಮ ಸಮೃದ್ಧಿಚಿiÀiÁದ ದೇವರನ್ನು ಪ್ರತಿಯೊಂದು ಪರಿಸ್ಥಿತಿಯಲ್ಲೂ ಪ್ರತಿಯೊಂದು ಸ್ಥಳದಲ್ಲೂ ಅನುಭವಿಸುವ ಮಾರ್ಗವಾಗಿದೆ.

ಕ್ರೈಸ್ತ ಜೀವದ ಮೂಲ ಘಟಕಗಳು, ಸಂಪುಟ 1ರಲ್ಲಿ, ನೀವು ಕರ್ತನ ನಾಮವನ್ನು ಕರೆಯುವುದು ಎಂಬ ಶಿರ್ಷೀಕೆಯ ಅಧ್ಯಾಯದಲ್ಲಿ ಕರ್ತನ ನಾಮವನ್ನು ಕರೆಯುವದರ ಕುರಿತು ಇನ್ನಷ್ಟು ಓದಬಹುದು. ನಿಮ್ಮ ಉಚಿತ ಪ್ರತಿಗಾಗಿ ವಿನಂತಿಸಿ.

*ಎಲ್ಲಾ ಉಲ್ಲೇಖಗಳು ಮತ್ತು ವಚನಗಳು ಲಿವಿಂಗ್ ಸ್ಟ್ರೀಮ್ಸ್ ಮಿನಿಷ್ಟ್ರಿಯಿಂದ ಬಿ ಗ್ರಂಥಹಕ್ಕು ಹೊಂದಿದೆ. ವಚನಗಳನ್ನು ಸತ್ಯವೇದ ಬಿ ಎಸ್ ಯ್ ಹೊಸ ಒಡಂಬಡಿಕೆಯಿಂದ ತೆಗೆದುಕೊಳ್ಳಲಾಗಿದೆ.


ಇತರರೊಂದಿಗೆ ಹಂಚಿಕೊಳ್ಳಿ