ಕರೋನವೈರಸ್ (ಕೊವಿಡ್-19) ಸಾಂಕ್ರಾಮಿಕ ರೋಗದ ಹಂತದಲ್ಲಿ ನಾವು ಏನು ಮಾಡಬೇಕು?

ಕರೋನವೈರಸ್ (ಕೊವಿಡ್-19) ಸಾಂಕ್ರಾಮಿಕ ರೋಗದ ಹಂತದಲ್ಲಿ ನಾವು ಏನು ಮಾಡಬೇಕು?

ಭೂಮಿಯಾದ್ಯಂತ ಇತ್ತೀಚಿನ ಕರೋನವೈರಸ್ ದುರಂತದಿಂದ, ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿತರಾಗಿದ್ದೇವೆ. ಆಂತಕವೂ ಭಯವೂ ಅನೇಕರ ಪ್ರತಿಕ್ರಿಯೆಯಾಗಿದೆ. ಆದರೆ ಪ್ರತಿಕ್ರಿಯಿಸಲು ಇನ್ನೊಂದು ಮಾರ್ಗವಿದೆ-ಅದು ದೇವರನ್ನು ಅರಸುವುದಾಗಿದೆ!

ಮಾರಕ ರೋಗದ ಸಮಯವು ಜನರಿಗೆ ಒಂದು ನಿರ್ದಿಷ್ಟ ಅವಕಾಶವನ್ನು ಒದಗಿಸುತ್ತದೆ, “ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸಿರಿ” (ಪೂರ್ವ. 7:14) “ಶಾಂತಿದಾಯಕನಾದ ದೇವರು ತಾನೇ” (1 ಥೆಸ. 5:23) ಪರಲೋಕದಲ್ಲಿ ಮಾತ್ರ ಉಳಿಯಲು ಬಯಸುವುದಿಲ್ಲ ಆದರೆ ಆತನು ನಮ್ಮಿಂದ ಕಂಡುಕೊಳ್ಳಲ್ಪಟ್ಟು ನಮ್ಮೆಡೆಗೆ ಸಮಾಧಾನವಾಗಿರಲು ಬಯಸುತ್ತಾನೆಂದು ದೇವರು ಹೇಳುತ್ತಾನೆ. ಯೇಸುವು, “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ,” ಎಂದು ನಮಗೆ ಹೇಳುತ್ತಾನೆ. (ಯೋಹಾನ 14:1) ನಾವು ಕಳವಳಗೊಳ್ಳಬೇಕಾಗಿಲ್ಲ. ನಾವು ಆತಂಕದಲ್ಲಿಯೂ ಭಯದಲ್ಲಿಯೂ ಜೀವಿಸಬೇಕಾಗಿಲ್ಲ. ಇನ್ನೊಂದು ಮಾರ್ಗವಿದೆ. “ಕರ್ತನು ಹತ್ತಿರವಾಗಿದ್ದಾನೆ” (ಫಿಲಿಪ್ಪಿ. 4:5).

ಆದರೆ ದೇವರು ಪರಲೋಕಗಳಲ್ಲಿದ್ದರೆ, ಆತನು ನಮಗೆ ಹೇಗೆ ಹತ್ತಿರವಾಗಿದ್ದಾನೆ? ನಮ್ಮ ಜೀವ ಮತ್ತು ನಮ್ಮ ಶಾಂತಿಯಾಗಲು ದೇವರು ಹಂತಗಳ ಸರಣಿಯ ಮೂಲಕ ಹೋಗಿದ್ದಾನೆಂದು ಸತ್ಯವೇದವು ಹೇಳುತ್ತದೆ. ಆತನು ನಮ್ಮೊಂದಿಗೆ ಜೀವಿಸಬಹುದೆಂದೂ ನಮ್ಮ ಮಾನವೀಯ ಪರಿಸ್ಥಿಯನ್ನು ನೇರವಾಗಿ ಅನುಭವಿಸಬಹುದೆಂದೂ ಆತನು ಪರಲೋಕದಿಂದ ಇಳಿದು, 2000 ವರ್ಷಗಳ ಹಿಂದೆ, ಯೇಸು ಎಂಬ ಹೆಸರಿನ ಮನುಷ್ಯನಾಗಲು ದೇಹಧಾರಿಯಾದನು. ಮಾನವ ಜೀವನ ಹೇಗಿರಬೇಕೆಂಬುದರ ಮಾದರಿಯಾಗಿ, ಯೇಸು ಈ ಭೂಮಿಯ ಮೇಲೆ ಪರಿಪೂರ್ಣವಾದ ಮಾನವೀಯ ಜೀವನವನ್ನು ಜೀವಿಸಿದನು-ನಮ್ಮನ್ನು ಬಾಧಿಸುವಂಥ ಪಾಪದ ವಿಷದಿಂದ ಮಲಿನಗೊಳ್ಳದೆ, ಮರಣವಾಗಿರುವ ಆ ವಿಷದ ಮುಖ್ಯ ಕಾರಣವಾದ ವಿಷಯಕ್ಕೆ ಇನ್ನು ಅಧೀನಗೊಳ್ಳದೆ (ಯೋಹಾನ 1:1, 14). ಯೇಸುವಿನಷ್ಟು, ಬೇರೆ ಯಾವ ಮಾನವ ಇತಿಹಾಸವು ಮಾನವನನ್ನು ಸಕಾರಾತ್ಮಕವಾಗಿ ಬಾಧಿಸಲ್ಪಟ್ಟಿಲ್ಲ. ಯೇಸು ಹೋದಲ್ಲೆಲ್ಲಾ, ತನ್ನನ್ನು ಅರಸುವವರಿಗೆ ಶಾಂತಿಯನ್ನು ತಂದನು.

ಆನಂತರ, ಪಾಪ ಮತ್ತು ಮರಣದ ಸಮಸ್ಯೆಯನ್ನು ಪರಿಹರಿಸಲು, ನಮ್ಮ ಬದಲಿಯಾಗಿ ನಮ್ಮ ಪರವಾಗಿ ಮರಣವನ್ನು ಅನುಭವಿಸಲು ಯೇಸು ಶಿಲುಬೆಗೆ ಹೋದನು (ಯೆಶಾ. 53:4-6). ಶಿಲುಬೆಯ ಮೇಲೆ, ಪಾಪದ ವಿಷಕ್ಕೆ ದೈವಿಕ ಪ್ರತ್ಯೌಷಧವನ್ನು ಉತ್ಪಾದಿಸಲು ಸಾಧ್ಯವಾಯಿತು-ಆ ದೈವಿಕ ಪ್ರತ್ಯೌಷಧವು, ಪಾಪ ಮತ್ತು ಮರಣವನ್ನು ನುಂಗಲು ನಮ್ಮೊಳಗೆ ಹಂಚಲ್ಪಡಲು ಬಿಡುಗಡೆಮಾಡಲ್ಪಟ್ಟ ಆತನ ನಿತ್ಯ ಜೀವವಾಗಿದೆ. ನಮ್ಮ ಪಾಪಗಳಿಂದ ನಮ್ಮನ್ನು ಕ್ಷಮಿಸಲು, ಆತನು ನಮಗಾಗಿ ಸತ್ತನು ಅದರಿಂದ ಪರಿಶುದ್ಧನಾದ ಮತ್ತು ನೀತಿವಂತ ದೇವರಾದಾತನೊಂದಿಗೆ ನಾವು ಶಾಂತಿಯಿಂದ ಇರಬಹುದು (ಎಫೆಸ. 2:13-14) ಮತ್ತು ನಾಶವಾಗದೆ ಆತನೊಳಗೆ ನಂಬುವ ಮೂಲಕ ನಿತ್ಯ ಜೀವವನ್ನು ಪಡೆಯಬಹುದು (ಯೋಹಾ 3:16). ಆತನ ಮರಣ ಮತ್ತು ಪುನರುತ್ಥಾನದ ಮೂಲಕ, ನಾವು ದೇವರೊಂದಿಗೆಯೂ ಇತರರೊಂದಿಗೆಯೂ ಶಾಂತಿಯನ್ನು ಹೊಂದಬಹುದು. ಆಗ, ಆತನ ಪುನರುತ್ಥಾನದ ಸಾಯಂಕಾಲದಂದು, ಆತನು ತನ್ನ ಶಿಷ್ಯರಿಗೆ ಕಾಣಿಸಿಕೊಂಡು, “ನಿಮಗೆ ಸಮಾಧಾನವಾಗಲಿ” ಮತ್ತು ಅವರ ಮೇಲೆ ಊದಿ “ಪವಿತ್ರಾತ್ಮವರವನ್ನು ತಕ್ಕೊಳ್ಳಿರಿ” ಎಂದನು (ಯೋಹಾನ 20:21-22).

ಇದೀಗ, “ದೇವರ ವಾಕ್ಯವು ನಿನ್ನ ಸಮಿಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಅನ್ನುತ್ತದೆ. ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ” (ರೋಮಾ. 10:8-9). ಯೇಸುವನ್ನು ನಿಮ್ಮ ಶಾಂತಿಯನ್ನಾಗಿ ಸ್ವೀಕರಿಸಲು ಮತ್ತು ಈ ಲೋಕದಲ್ಲಿ ಪಾಪ, ಕತ್ತಲೆ ಮತ್ತು ಸಾವಿನಿಂದ ರಕ್ಷಿಸಲ್ಪಡಲು ಒಂದು ಸರಳ, ಮಾರ್ಗವೆಂದರೆ ಈ ಕೆಳಗಿನಂತೆ ಪ್ರಾರ್ಥಿಸುವುದು:

ಕರ್ತನಾದ ಯೇಸುವೇ, ನಾನು ನಿನ್ನೊಳಗೆ ವಿಶ್ವಾಸವಿಡುತ್ತೇನೆ, ನನ್ನನ್ನು ಪಾಪ ಮತ್ತು ಮರಣದಿಂದ ರಕ್ಷಿಸು! ಕರ್ತನಾದ ಯೇಸುವೇ, ನಾನು ನಿನ್ನನ್ನು ನನ್ನ ಜೀವವಾಗಿಯೂ ಶಾಂತಿಯಾಗಿಯೂ ಸ್ವೀಕರಿಸಲು ಬಯಸುತ್ತೇನೆ! ಕರ್ತನಾದ ಯೇಸುವೇ, ನನ್ನಲ್ಲಿ ಜೀವಿಸಲು ನನ್ನೊಳಗೆ ಬಂದದ್ದಕ್ಕಾಗಿ ನಿನಗೆ ಕೃತಜ್ಞತೆ ಸಲ್ಲಸುತ್ತೇನೆ!

ಯೇಸುವನ್ನು ಸ್ವೀಕರಿಸಲು ನೀವು ಪ್ರಾರ್ಥಿಸಿದ ಬಳಿಕ, ನಿಯಮಿತವಾಗಿ ಆತನೊಂದಿಗೆ ಅನ್ಯೋನ್ಯತೆ ಮಾಡಲು ಅಭ್ಯಾಸಿಸುವದನ್ನು ಮುಂದುವರಿಸಬಹುದು. ದೇವರೊಂದಿಗೆ ಅನ್ಯೋನ್ಯತೆ ಮಾಡುವುದು ಆತನೊಂದಿಗೆ ಸರಳವಾಗಿ ನಿಜವಾದ ರೀತಿಯಲ್ಲಿ ಸಂಭಾಷಿಸುವುದಾಗಿದೆ. “ಯಾವ ಸಂಬಂಧವಾಗಿಯೂ ಚಿಂತಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆಯ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ” (ಫಿಲಿಪ್ಪಿ. 4:6) ಪ್ರಾರ್ಥನೆಯಲ್ಲಿ ಆತನ ಬಳಿಗೆ ಬನ್ನಿರಿ. ನಿಮ್ಮ ಚಿಂತೆಗಳನ್ನು ಆತನೆಡೆಗೆ ತೆರೆಯಿರಿ ಮತ್ತು ಆತನು ಯಾರೆಂದೂ ಆತನು ನಿಮಗಾಗಿ ಏನು ಮಾಡಿದ್ದಾನೆಂದೂ ಆತನಿಗೆ ಕೃತಜ್ಞತೆ ಸಲ್ಲಿಸಿರಿ. ಹೀಗೆ ಮಾಡುವಾಗ, ನೀವು ಆತನ ರಕ್ಷಣೆಯಲ್ಲಿ ಪ್ರವೇಶಿಸಬಹುದು, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು” (ವ. 7)..

ದೇವರು ಯಾರೆಂದು ಮತ್ತು ಯೇಸುವಿನಲ್ಲಿ ಆತನು ನಮಗಾಗಿ ಏನು ಮಾಡಿದ್ದಾನೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಜಾಲತಾಣದಲ್ಲಿ ಕೆಲವು ಉಚಿತ ಪುಸ್ತಕಗಳನ್ನು ಡೌನ್‍ಲೋಡ್ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

https://www.rhemabooks.org/kn/free-christian-books/


ಇತರರೊಂದಿಗೆ ಹಂಚಿಕೊಳ್ಳಿ