ತಿಳುವಳಿಕೆಯನ್ನು ಮೀರಿದ ಶಾಂತಿಯನ್ನು ಹೇಗೆ ನಾವು ಹೊಂದಬಹುದು?

ತಿಳುವಳಿಕೆಯನ್ನು ಮೀರಿದ ಶಾಂತಿಯನ್ನು ಹೇಗೆ ನಾವು ಹೊಂದಬಹುದು?

ನಮ್ಮ ಬಾಹ್ಯ ಪರಿಸರವನ್ನು ನಿಯಂತ್ರಿಸಲು ಪ್ರಯತ್ನಿಸುವದರ ಮೂಲಕ ಶಾಂತಿಯನ್ನು ಹೊಂದುವುದು ಏಕೈಕ ಮಾರ್ಗವೆಂದು ನಮ್ಮಲ್ಲಿ ಅನೇಕರು ಭಾವಿಸುತ್ತಾರೆ. ಹೇಗಿದ್ದರೂ, ನಾವು ನಿಜವಾಗಿಯೂ ನಮ್ಮ ಪರಿಸರದಿಂದ ನಿಯಂತ್ರಿಸಲ್ಪಡುವವರಾಗಿದ್ದೇವೆ. ಬಾಹ್ಯ ಪರಿಸರವು ಶಾಂತವಾಗಿರುವದಕ್ಕಾಗಿ ನಾವು ನಿರೀಕ್ಷಿಸಬಹುದು, ಆದರೆ ಬದಲಾಗಿ, ನಮ್ಮ ಜೀವನವು ಶಾಂತಿಯನ್ನು ಕಂಡುಹಿಡಿಯಲು ಮತ್ತು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಗಳಿಂದ ತುಂಬಿರುತ್ತದೆ. ಮತ್ತೊಂದೆಡೆ, ಸತ್ಯವೇದವು ಸಂಪೂರ್ಣವಾಗಿ ಒಂದು ವಿಭಿನ್ನ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ; ಈ ಜೀವನವೇ ನಮ್ಮ ಪರಿಸರವನ್ನು ಲೆಕ್ಕಿಸದೆ ಉನ್ನತವಾದ, ಆಳವಾದ, ನಿತ್ಯವಾದ, ಹಾಗೂ ಮೀರಿದ ಶಾಂತಿಯನ್ನು ತರುತ್ತದೆ.

ಆ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು. ಫಿಲಿಪ್ಪಿ. 4:7

ಮೊದಲನೆಯದಾಗಿ, ನಾವು ಕೇವಲ ಮನುಷ್ಯನ ಶಾಂತಿಗಿಂತ ಉನ್ನತವಾದ ಏನ್ನನೋ ನೋಡುತ್ತೇವೆ-ಸ್ವತಃ ದೇವರ ಶಾಂತಿಯು ಪ್ರತಿಯೊಬ್ಬರಿಗೆ ಲಭ್ಯವಾಗಿದೆ! ಮನುಷ್ಯನು ಉಂಟುಮಾಡುವ ಶಾಂತಿ ಸೀಮಿತವಾಗಿದೆ, ಆದರೆ ದೇವರ ಶಾಂತಿ ಅಪರಿಮಿತವಾಗಿದೆ, ಇದು ನಮ್ಮ ತಿಳುವಳಿಕೆ ಮತ್ತು ಭಾವನೆಗಳನ್ನು ಮೀರಿದೆ. ನಾವು ಅಸ್ತವ್ಯಸ್ತವಾಗಿರುವ, ಒತ್ತಡದ ಬಾಹ್ಯ ಸನ್ನಿವೇಶಗಳ ಮೂಲಕ ಸಾಗುತ್ತಿರುವಗ, ದೇವರ ಶಾಂತಿಯ ಮೂಲಕ ಇನ್ನೂ ಶಾಂತಿಯ ಒಂದು ಆಂತರಿಕ ಸಂವೇದನೆಯನ್ನು ನಾವು ಹೊಂದಬಹುದು. ಈ ಶಾಂತಿ ನಮ್ಮ ಹೃದಯ ಮತ್ತು ಆಲೋಚನೆಗಳನ್ನು ಕಾಪಾಡಲು ಕೂಡಾ ಶಕ್ತವಾಗಿದೆ. ನಾವು ದೇವರ ಶಾಂತಿಯನ್ನು ಹೊಂದಿರುವಾಗ ನಿರುತ್ಸಾಹಗೊಳ್ಳುವದಿಲ್ಲ ದಣಿಯುವದಿಲ್ಲ ಅಥವಾ ಆಂತಕಗೊಳ್ಳುವದಿಲ್ಲ.

ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ. ಯೋಹಾನ 14:27

ಒಬ್ಬ ಕ್ರೈಸ್ತನು ಬಲಹೀನನಾಗಿದ್ದರೂ ಬಲಶಾಲಿ ಎಂಬ ಭಾವನೆಹೊಂದುತ್ತಾನೆ, ನೋವನ್ನನುಭವಿಸುವಾಗಲೂ ಸಮಾಧಾನದ ಅರಿವು ಹೊಂದಿರುತ್ತಾನೆ. ಅವನು ನೋವನ್ನು ಭಾವಿಸುತ್ತಾನೆ ಯಾಕೆಂದರೆ ಅವನಿಗೆ ಹೊರಗಿನಿಂದ ಸಂಕಟಗಳಿವೆ, ಅವನು ಸಮಾಧಾನದ ಅರಿವನ್ನು ಭಾವಿಸುತ್ತಾನೆ ಯಾಕೆಂದರೆ ಅವನು ಕರ್ತನನ್ನು ಸಂಧಿಸಿ ಆಂತರ್ಯದಿಂದ ಕರ್ತನ್ನು ಸ್ಪರ್ಶಿಸುತ್ತಾನೆ.
ಜೀವದ ತಿಳಿವು, ಪುಟ. 64*

ಎರಡನೆಯದಾಗಿ, ದೇವರ ಶಾಂತಿಯನ್ನು ನಾವು ಹೇಗೆ ಅನುಭವಿಸಬಹುದು ಎಂದು ನಮಗೆ ಸತ್ಯವೇದದಲ್ಲಿ ತಿಳಿಸಲಾಗಿದೆ. ದೇವರು ನಮಗೆ ಶಾಂತಿಯನ್ನು ಒಂದು ವಸ್ತುವಾಗಿ ನೀಡುವದಿಲ್ಲ, ಬದಲಿಗೆ ಆತನು ನಮಗೆ ಒಬ್ಬ ವ್ಯಕ್ತಿಯನ್ನು ಕೊಡುತ್ತಾನೆ-ಆತನು ಸ್ವತಃ ಕ್ರಿಸ್ತನನ್ನೇ ಶಾಂತಿಯನ್ನಾಗಿ ಕೊಡುತ್ತಾನೆ. ಶಾಂತಿಯನ್ನು ಪಡೆಯಲು ನಾವು ಆಂತರ್ಯದಲ್ಲಿ ಕ್ರಿಸ್ತನನ್ನು ಸ್ಪರ್ಶಿಸಬೇಕಾಗಿದೆ. ಶಾಂತಿಯ ಈ ಅನುಭವವು ನಮ್ಮ ಮಾನವ ಆತ್ಮದಲ್ಲಿ ಪ್ರಾರಂಭವಾಗುತ್ತದೆ. ದೇವರು ಮನುಷ್ಯನನ್ನು ಒಂದು ಆತ್ಮದೊಂದಿಗೆ ಸೃಷ್ಟಿಸಿದನು, ಆದರೆ ಮನುಷ್ಯನ ಪತನದ ಮೂಲಕ, ನಮ್ಮ ಆತ್ಮವು ಮರಣಿಸಿ ಕಾರ್ಯನಿರ್ವಹಿಸಲು ಅಶಕ್ತವಾಯಿತು. ದೇವರ ಶಾಂತಿಯನ್ನು ಹೊಂದಲು ಪೂರ್ವಾಪೇಕ್ಷಿತವಾಗಿ ಮೊದಲು ನಮ್ಮ ಆತ್ಮವು ಜೀವಂತಗೊಳಿಸಲ್ಪಡಬೇಕು.

[ರೋಮಾಪುರದವರ 8] ವಚನ 6ರಲ್ಲಿ, ಅಪೊಸ್ತಲನು “ಆತ್ಮನವುಗಳು ಮೇಲೆ ಮನಸ್ಸಿಡುವುದು ಜೀವವೂ ಮನಶ್ಯಾಂತಿಯೂ ಆಗಿದೆ” ಎಂದು ಹೇಳುತ್ತಾನೆ. ಆತ್ಮನ ಮೇಲೆ ಮನಸ್ಸಿಡುವುದು ಜೀವ ಮಾತ್ರವಲ್ಲದೆ ಮನಶ್ಯಾಂತಿಯೂ ಆಗಿದೆ ಎಂದು ಇದರ ಅರ್ಥ. ಆದುದರಿಂದ ಜೀವವು ಆತ್ಮನ ಫಲ, ಮತ್ತು ಶಾಂತಿಯೂ ಆತ್ಮನ ಫಲವಾಗಿದೆ. ನಾವು ಆತ್ಮವನ್ನು ಮುಟ್ಟುವಾಗ ಜೀವವನ್ನೂ ಹಾಗಯೇ ಶಾಂತಿನ್ನೂ ಮುಟ್ಟುತ್ತೇವೆ.
ಜೀವದ ತಿಳಿವು, ಪುಟ. 77*

ಮೂರನೆಯದಾಗಿ, ನಮ್ಮ ಮನಸ್ಸು ನಮ್ಮ ಪ್ರಾಣದ ಪ್ರಮುಖ ಭಾಗವಾಗಿದೆ-ಆದ್ದರಿಂದ ನಮ್ಮ ಮನಸ್ಸು ಇರಿಸಿದ್ದಲ್ಲಿ, ನಮ್ಮ ಇಡೀ ವ್ಯಕ್ತಿತ್ವವು ಹಿಂಬಾಲಿಸುತ್ತದೆ. ನಮ್ಮ ಮನಸ್ಸು ನಮ್ಮ ಸುತ್ತಲಿನ ಬಾಹ್ಯ ಘಟನೆಗಳ ಮೇಲೆ ಸಂಪೂರ್ಣವಾಗಿ ಇರಿಸಲ್ಪಟ್ಟಿದ್ದರೆ, ನಾವು ಆಗ ದೇವರ ಶಾಂತಿಯನ್ನು ಅನುಭವಿಸಲಾರೆವು. ನಾವು ಜೀವವುಳ್ಳವರೂ ಶಾಂತಿಯುತರೂ ಆಗಿರುವ ಬದಲಾಗಿ ಆಂತರ್ಯದಲ್ಲಿ ಮರಣಿಸಿದವರಾಗುತ್ತೇವೆ. ನಾವು ನಮ್ಮ ಆತ್ಮದ ಮೇಲೆ ನಮ್ಮ ಮನಸ್ಸನ್ನು ಇರಿಸಿ ಆಂತರ್ಯದಲ್ಲಿ ಆತ್ಮವನ್ನು ಸ್ಪರ್ಶಿಸಲು ಕಲಿಯಬೇಕು.

ದೇವರನ್ನು ಆಂತರ್ಯದಲ್ಲಿ ಸಾಕಷ್ಟು ಹೊಂದಿದ್ದರೆ, ದೇವರನ್ನೂ ದೇವರ ಜೀವವನ್ನೂ ಅನುಭವಿಸಿದ್ದರೆ, ಆಂತರ್ಯದಲ್ಲಿ ಸಾಕಷ್ಟು ಶಾಂತಿ ಇರುತಿತ್ತು. ಈ ಶಾಂತಿಯು ಪರಿಸರದ ಶಾಂತತೆಯಲ್ಲ, ಆಂತರ್ಯದ ಶಾಂತಿಯ ಒಂದು ಸ್ಥಿತಿ.
ದೇವರನ್ನು ಆಂತರ್ಯದಲ್ಲಿ ಸಾಕಷ್ಟು ಹೊಂದಿದ್ದರೆ, ದೇವರನ್ನೂ ದೇವರ ಜೀವವನ್ನೂ ಅನುಭವಿಸಿದ್ದರೆ, ಆಂತರ್ಯದಲ್ಲಿ ಸಾಕಷ್ಟು ಶಾಂತಿ ಇರುತಿತ್ತು. ಈ ಶಾಂತಿಯು ಪರಿಸರದ ಶಾಂತತೆಯಲ್ಲ, ಆಂತರ್ಯದ ಶಾಂತಿಯ ಒಂದು ಸ್ಥಿತಿ.*

ನಾಲ್ಕನೆಯದಾಗಿ, ನಮ್ಮ ದೇವರ ಅನುಭವ, ದೇವರ ಜೀವನ ಹಾಗೂ ಶಾಂತಿ ಎಲ್ಲವೂ ಒಟ್ಟಿಗೆ ಹೋಗುತ್ತದೆ. ದೇವರನ್ನು ಪಡೆಯುವ ಅನುಭವವು ಶಾಂತಿಗೆ ಕಾರಣವಾಗುತ್ತದೆ. ಈ ಆಂತರಿಕ ಶಾಂತಿಯು ಬಾಹ್ಯ ಪರಿಸರದ ಮೂಲಕ ನಾವು ಕಂಡುಕೊಳ್ಳುವ ಯಾವುದೇ ಶಾಂತಿಗಿಂತ ಆಳವಾಗಿದೆ.

ನಿಮ್ಮ ತಿಳುವಳಿಕೆಯನ್ನು ಮೀರಿದ ಮತ್ತು ಇನ್ನೂ ಶಾಂತಿಯ ದೇವರನ್ನು ಸ್ವೀಕರಿಸದ ಶಾಂತಿಯನ್ನು ನೀವು ಹುಡುಕುತ್ತಿದ್ದರೆ, ತೆರೆದ ಹೃದಯದಿಂದ ಆತನಿಗೆ ಹೇಳಿ:

“ಕರ್ತನಾದ ಯೇಸುವೇ, ನನಗೆ ನಿನ್ನ ಅವಶ್ಯಕತೆ ಇದೆ. ಕರ್ತನೇ, ನಾನು ನಿನ್ನನ್ನು ನಂಬುತ್ತೇನೆ. ನನ್ನೊಳಗೆ ಬಾ! ಇದೀಗ ನಿನ್ನ ಜೀವನವನ್ನು ನನಗೆ ಕೊಡು. ನಿನ್ನ ಶಾಂತಿಯಿಂದ ನನ್ನನ್ನು ತುಂಬಿಸು. ಕರ್ತನೇ, ನನ್ನ ಜೀವನ ಮತ್ತು ನಿಜವಾದ ಭದ್ರತೆಗಾಗಿ ಧನ್ಯವಾದಗಳು. ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.”

ಶಾಂತಿಯನ್ನು ಹೊಂದಲು ಪ್ರಾಯೋಗಿಕ ಮಾರ್ಗವನ್ನು ನೋಡಲು “ತೊಂದರೆ ಮತ್ತು ಸಂಕಟದಿಂದ ರಕ್ಷಿಸಲ್ಪಡಲು ಕರ್ತನ ನಾಮವನ್ನು ಕರೆಯುವದರ” ಕುರಿತು ನಮ್ಮ ಮುಂದಿನ ಲೇಖನವನ್ನು ಓದಲು ನೀವು ಮುಂದುವರಿಸಬಹುದು.

*ಎಲ್ಲಾ ಉಲ್ಲೇಖಗಳು ಮತ್ತು ವಚನಗಳು ಲಿವಿಂಗ್ ಸ್ಟ್ರೀಮ್ಸ್ ಮಿನಿಷ್ಟ್ರಿಯಿಂದ © ಗ್ರಂಥಹಕ್ಕು ಹೊಂದಿದೆ. ವಚನಗಳನ್ನು ಸತ್ಯವೇದ ಬಿ ಎಸ್ ಯ್ ಹೊಸ ಒಡಂಬಡಿಕೆಯಿಂದ ತೆಗೆದುಕೊಳ್ಳಲಾಗಿದೆ.


ಇತರರೊಂದಿಗೆ ಹಂಚಿಕೊಳ್ಳಿ