ಉಚಿತ ಕ್ರೈಸ್ತೀಯ ಪುಸ್ತಕಗಳು

ಈ ಉಚಿತ ಪುಸ್ತಕಗಳು ಸರಳ, ಆಳವಾದ, ಪ್ರಾಯೋಗಿಕ ಮತ್ತು ಜೀವನವನ್ನು ಬದಲಾಯಿಸುತ್ತವೆ. ಇ-ಬುಕ್ ಅಥವಾ ಪುಸ್ತಕದ ರೂಪದಲ್ಲಿ ಲಭ್ಯವಿರುವ ನಮ್ಮ ಉಚಿತ ಕ್ರೈಸ್ತೀಯ ಸಾಹಿತ್ಯ ಮಾಲಿಕೆಯಲ್ಲಿನ ಎಲ್ಲಾ ಪುಸ್ತಕಗಳನ್ನು ಓದಿ.

ಇಬುಕ್ ಅಥವಾ ಮುದ್ರಿತ ಪುಸ್ತಕ ಸ್ವರೂಪದಲ್ಲಿ ಲಭ್ಯವಿದೆ

ನಮ್ಮ ಪುಸ್ತಕಗಳು

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಒಂದು

ನಿಮ್ಮ ಅಡಿಪಾಯ ಎಷ್ಟು ದೃಢವಾಗಿದೆ?

ಮನುಷ್ಯನಿಗಾಗಿ ದೇವರ ಯೋಜನೆಯನ್ನು ತಿಳಿಯಲು ಈ ಪುಸ್ತಕವು ನಿಮಗೆ ಸಹಾಯ ಮಾಡುತ್ತದೆ. ಇದು ಹೊಸ ಮತ್ತು ಅನುಭವಿ ಕ್ರೈಸ್ತೀಯರಿಗೆ ಅಗತ್ಯವಾದ ನಾಲ್ಕು ಪ್ರಮುಖ ಅನುಭವಗಳನ್ನು ತೆರೆಯುತ್ತದೆ, ಇದು ಐಶ್ವರ್ಯವಂತ ಮತ್ತು ಅರ್ಥಪೂರ್ಣ ಕ್ರೈಸ್ತೀಯ ಜೀವನಕ್ಕೆ ಒಂದು ದೃಢವಾದ ಆಧಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಎರಡು

ದೇವರೊಂದಿಗಿನ ನನ್ನ ಸಂಬಂಧವನ್ನು ನಾನು ಹೇಗೆ ಅಘಾದಪಡಿಸಬಹುದು?

ಪ್ರತಿದಿನ ಬೆಳಿಗ್ಗೆ ಕರ್ತನೊಂದಿಗೆ ಏಕಾಂಗಿಯಾಗಿ ಸಮಯ ಕಳೆಯುವುದರಿಂದ ದೇವರೊಂದಿಗಿನ ನಮ್ಮ ಸಂಬಂಧವು ಸಿಹಿ ಮತ್ತು ವೈಯಕ್ತಿಕವಾಗಿರುತ್ತದೆ. ಈ ಸಮಯವು ನಮ್ಮ ಕ್ರೈಸ್ತೀಯ ಜೀವನದಲ್ಲಿ ಪ್ರಗತಿಪರ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ಮುನ್ನಡೆಯಲು ಕಾರಣವಾಗುತ್ತದೆ. ಈ ಪುಸ್ತಕವನ್ನು ಓದುವ ಮೂಲಕ ಕರ್ತನೊಂದಿಗೆ ಈ ಸಮಯವನ್ನು ಹೊಂದಲು ಎಷ್ಟು ಸರಳವಾಗಿದೆ ಎಂಬುದನ್ನು ಕಂಡುಕೊಳ್ಳಿ.

ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು

ಎಲ್ಲವನ್ನು-ಒಳಗೊಂಡಿರುವ ಕ್ರಿಸ್ತನು

ನೀವು ಕ್ರಿಸ್ತನ ಅನಿಯಮಿತ ಅನುಭವವನ್ನು ಬಯಸುತ್ತೀರಾ?

ಈ "ಎಲ್ಲವನ್ನು ಒಳಗೊಂಡ ಕ್ರಿಸ್ತನ" ಅನುಭವಕ್ಕೆ ನಾವು ಪ್ರವೇಶಿಸುವ ಮೊದಲು ಕ್ರಿಸ್ತನು ಎಷ್ಟು ಅಪರಿಮಿತನೆಂದು ನಾವು ಮೊದಲು ನೋಡಬೇಕು. ಈ ಪುಸ್ತಕವು ನೋಡಲು ಮತ್ತು ಪ್ರವೇಶಿಸಲು ನಿಮಗೆ ಸಹಾಯ ಮಾಡುತ್ತದೆ. ಧರ್ಮೋಪದೇಶಕಾಂಡದ ಈ ನಿರೂಪಣೆಯಲ್ಲಿ, ಕಾನಾನ್‌ನ ಉತ್ತಮ ಭೂಮಿಯ ಅದ್ಭುತ ಚಿತ್ರವು ಕ್ರಿಸ್ತನು ತನ್ನ ವಿಶ್ವಾಸಿಗಳಿಗೆ ಯಾರೆಂಬುದರ ಚಿತ್ರ ಏನಾಗಿದೆ ಎಂಬುದನ್ನು ನೋಡಿ.

ದೇವರ ಕಾರ್ಯನಿರ್ವಹಣೆ

ದೇವರ ಕಾರ್ಯನಿರ್ವಹಣೆ

ದೇವರ ನಿತ್ಯ ಉದ್ದೇಶ ನನಗೆ ಏಕೆ ಮುಖ್ಯವಾಗಬೇಕು?

ಇಡೀ ಸತ್ಯವೇದವು ದೇವರ ನಿತ್ಯ ಉದ್ದೇಶ ಮತ್ತು ಅದನ್ನು ಹೇಗೆ ಪೂರೈಸುತ್ತದೆ ಎಂಬುದನ್ನು ವಿವರಿಸುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ದೇವರು ಈ ಯೋಜನೆಯನ್ನು ಸ್ವತಃ ಪೂರೈಸಲು ಬಯಸುವುದಿಲ್ಲ. ಆತನು ಮನುಷ್ಯನನ್ನು ಸೇರಿಸಲು ನಿರ್ಧರಿಸಿದನು. ಕ್ರಿಸ್ತನಲ್ಲಿ ನಂಬಿಕೆಯಿಡುವ ನಾವೆಲ್ಲರೂ ದೇವರ ಯೋಜನೆಯ ಭಾಗವಾಗಿದ್ದೇವೆ. ಆದ್ದರಿಂದ, ಈ ಯೋಜನೆಯಲ್ಲಿ ನೀವು ಹೇಗೆ ಭಾಗವಹಿಸುತ್ತೀರಿ? ಆತನ ಉದ್ದೇಶದಲ್ಲಿ ನಾವು ಏಕೆ ಪ್ರಮುಖರು ಎಂಬುದನ್ನು ನೋಡಲು ಈ ಪುಸ್ತಕವನ್ನು ಓದಿ.

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು

ಕ್ರೈಸ್ತ ಜೀವನದ ಮೂಲ ಘಟಕಗಳು, ಸಂಪುಟ ಮೂರು

ಸರಿ ಮತ್ತು ತಪ್ಪಿನಿಂದ ಬದುಕುವುದಕ್ಕಿಂತ ಹೆಚ್ಚಿನದು ಇದೆಯೇ?

ಸರಿ ಮತ್ತು ತಪ್ಪು ಎಂಬ ಸೂತ್ರದಿಂದ ನಮ್ಮನ್ನು ನಡೆಸಿಕೊಳ್ಳಲು ಸಮಾಜವು ನಮಗೆ ಕಲಿಸುತ್ತದೆ, ಆದರೆ ಸತ್ಯವೇದ ಈ ಕುರಿತು ಏನು ಹೇಳುತ್ತದೆ? ನಾವು ಬದುಕಬಲ್ಲ ಉನ್ನತ ಸೂತ್ರವನ್ನು ಸತ್ಯವೇದ ತೋರಿಸುತ್ತದೆ: ಅದು ಜೀವನದ ಸೂತ್ರ. ದೇವರ ನಿತ್ಯ ಯೋಜನೆಯನ್ನು ನೆರವೇರಿಸಲು ನಾವು ಈ ಸೂತ್ರದಿಂದ ಜೀವಿಸಬೇಕೆಂದು ದೇವರು ಬಯಸುತ್ತಾನೆ.

ಜೀವದ ತಿಳಿವು

ಜೀವದ ತಿಳಿವು

ನನ್ನ ಕ್ರೈಸ್ತೀಯ ಜೀವನದಲ್ಲಿ ನಾನು ಹೇಗೆ ಬೆಳೆಯುವುದು?

ಜೀವದಲ್ಲಿ ಬೆಳೆಯಬೇಕಾದರೆ, ಜೀವವೆಂದರೇನು, ಅದು ಎಲ್ಲಿಂದ ಬರುತ್ತದೆ ಮತ್ತು ಈ ಜೀವವನ್ನು ಹೇಗೆ ಪಡೆಯುವುದು ಎಂದು ನಾವು ತಿಳಿದಿರಬೇಕು. ಉತ್ತರಗಳು ನಡವಳಿಕೆಯ ಸುಧಾರಣೆಯಲ್ಲಿ, ಕೇವಲ ಜ್ಞಾನದ ಹೆಚ್ಚಳದಲ್ಲಿ ಅಥವಾ ಉಡುಗೊರೆಗಳಲ್ಲಿ ಅಥವಾ ಶಕ್ತಿಯಲ್ಲಿ ವಾಸಿಸುವುದಿಲ್ಲ. ಜೀವದಲ್ಲಿ ಬೆಳವಣಿಗೆಗಾಗಿ ತಿಳಯವಳಿಕೆಯನ್ನೂ ಮುನ್ನಡೆಸುವಿಕೆಯನ್ನೂ ಪಡೆದುಕೊಳ್ಳಿ.

ಮಹಿಮೆಯುಳ್ಳ ಸಭೆ

ಮಹಿಮೆಯುಳ್ಳ ಸಭೆ

ದೇವರು ನಮಗಿಂತ ವಿಭಿನ್ನವಾಗಿ ಸಭೆಯನ್ನು ನೋಡುತ್ತಾನೆಯೇ?

"ಸಭೆ" ಎಂಬ ಪದವನ್ನು ನಾವು ಕೇಳಿದಾಗ ನಮ್ಮ ಆಲೋಚನೆಯು ಮಾನವ ಪರಿಕಲ್ಪನೆಗಳಿಂದ ಕೂಡಿದೆ ಎಂದು ನಮಗೆ ತಿಳಿದಿರುವುದಿಲ್ಲ. ದೇವರು ಸಭೆಯನ್ನು ಹೇಗೆ ನೋಡುತ್ತಾನೆ ಎಂಬುದನ್ನು ತೋರಿಸುವ ಮೂಲಕ ಈ ಪುಸ್ತಕವು ನಿಮ್ಮ ಆಲೋಚನೆಗಳನ್ನು ನವೀಕರಿಸುತ್ತದೆ. ಸಭೆಯ ಬಗ್ಗೆ ದೇವರ ದೃಷ್ಟಿಕೋನವನ್ನು ತೋರಿಸುವ ನಾಲ್ಕು ಮಹೋನ್ನತ ಪ್ರತಿರೂಪವನ್ನು ಸತ್ಯವೇದ ನಮಗೆ ತೋರಿಸುತ್ತದೆ. ನಿಮ್ಮ ತಿಳುವಳಿಕೆಯನ್ನು ಮಿತಿಗೊಳಿಸಬೇಡಿ. ಸಭೆಯನ್ನು ಅದ್ಭುತ ರೀತಿಯಲ್ಲಿ ನೋಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.


ಇತರರೊಂದಿಗೆ ಹಂಚಿಕೊಳ್ಳಿ