ಎಂದಿಗೂ ವಿಫಲವಾಗದ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಹಿಡಿಯಬಹುದು?

ಎಂದಿಗೂ ವಿಫಲವಾಗದ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಹಿಡಿಯಬಹುದು?

ನಾವು ನಮ್ಮ ಜೀವನವನ್ನು ಜೀವಿಸುತ್ತಿರುವಾಗ, ವೃದ್ಧ, ಅನಾರೋಗ್ಯ ಮತ್ತು ಸಾವು ಈ ಮೂರು ಅನಿವಾರ್ಯ ನಕಾರಾತ್ಮಕ ವಿಷಯಗಳನ್ನು ಎದುರಿಸುವ ಖಾತ್ರಿ ನಮಗಿದೆ: ನಾವು ಎಷ್ಟೇ ವ್ಯಾಯಾಮ ಮಾಡಿದರೂ ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಯತ್ನಿಸಿದರೂ ಈ ಗಮ್ಯಸ್ಥಾನವನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಅಂತಿಮವಾಗಿ ನಮ್ಮ ಜೀವವು ಕೊನೆಗೊಳ್ಳುತ್ತದೆ. ನಾವು ಸಾಯುವಾಗ, ಏನು ಉಳಿದಿದೆ? ಏನೂ ಉಳಿಯುವುದಿಲ್ಲ. ಅತ್ಯಂತ ಯಶಸ್ವಿ ಜನರು ಪರಂಪರೆಯನ್ನು ಬಿಟ್ಟು ಹೋಗಬಹುದಾದರೂ, ಒಮ್ಮೆ ಅವರು ಇನ್ನೂ  ಜೀವಂತವಾಗಿರದಿದ್ದಾಗ ನಿಜವಾಗಿಯೂ ಹೊಂದಿರುವುದಾದರೂ ಏನು? ಈ ಹಂತದಲ್ಲಿ ಸಾಧಿಸಿದ ಮತ್ತು ಸಂಗ್ರಹಿಸಿದ ಎಲ್ಲವೂ ವ್ಯರ್ಥವಾಗಿದೆ. ಮಾನವ ಜೀವನವು ಹತಾಶವಾಗಿದೆ ಎಂದು ನಾವು ತೀರ್ಮಾನಿಸಬೇಕು. ನಮ್ಮ ಅಂತಿಮ ಗಮ್ಯಸ್ಥಾನವಾಗಿ ಸಾವಿನೊಂದಿಗೆ ಕೊಳೆಯುತ್ತಿರುವ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ ಆದರೂ ನಾವೆಲ್ಲರೂ ಇನ್ನೂ ನಿರೀಕ್ಷೆಯನ್ನು ಹುಡುಕುತ್ತಿದ್ದೇವೆ. ನಾವು ಅದನ್ನು ಕಂಡುಹಿಡಿಯಬಹುದೇ?

ಎಲ್ಲಾ ಜನರು ತಮ್ಮ ನಿರೀಕ್ಷೆಯನ್ನು ಇಡಲು ಏನನ್ನಾದರೂ ಅಥವಾ ಯಾರನ್ನಾದರೂ ಹುಡುಕುತ್ತಾರೆ. ಸಾಮಾನ್ಯವಾಗಿ, ನಮ್ಮ ನಿರೀಕ್ಷೆಯ ವಸ್ತುವು ಬದಲಾಗುತ್ತದೆ ಏಕೆಂದರೆ ವಸ್ತುವು ವಿಫಲಗೊಳ್ಳುತ್ತದೆ ಮತ್ತು ನಮಗೆ ಶಾಶ್ವತವಾದ ನೀರಿಕ್ಷೆಯನ್ನು ನೀಡಲು ಅಸಮರ್ಪಕವಾಗುತ್ತದೆ. ನಮಗೆ ವಿಫಲವಾಗದ ವಸ್ತುವನ್ನು ಕಂಡುಹಿಡಿಯಲು ಸಾಧ್ಯವಾಗದೆ ನಾವು ಹತಾಶತೆಯ ಅಂತ್ಯವಿಲ್ಲದ ಚಕ್ರದಲ್ಲಿ ಸಿಲುಕಿದ್ದೇವೆ. ಪ್ರತಿ ಅರ್ಹತೆಯಲ್ಲಿಯೂ ಪರೀಕ್ಷೆಯಲ್ಲಿಯೂ  ಉತ್ತೀರ್ಣನಾಗಿರುವ ಶಾಶ್ವತವಾಗಿ ಸುರಕ್ಷಿತನಾಗಿರುವ ಆತನಲ್ಲಿ ನಮ್ಮ ನಿರೀಕ್ಷೆಯನ್ನು ಇಡಬಲ್ಲ ಒಬ್ಬ ವ್ಯಕ್ತಿಯು ಇದ್ದಾನೆ - ದೇವರೇ ನಮ್ಮ ನಿರೀಕ್ಷೆಯ ವಸ್ತುವಾಗಿರಬೇಕು.

ನೀವು ಪೂರ್ವಕಾಲದಲ್ಲಿ ಕ್ರಿಸ್ತನನ್ನು ಸೇರದವರಾಗಿದ್ದು,.... ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದೀರೆಂದು ಜ್ಞಾಪಕಮಾಡಿಕೊಳ್ಳಿರಿ. ಎಫೆಸದವರಿಗೆ 2:12

ನಿತ್ಯನು ಆದ ದೇವರನ್ನು ನಾವು ಕಳೆದುಕೊಂಡಿರುವುದರಿಂದ ಮಾನವ ಜೀವನವು ಹತಾಶವಾಗಿದೆ. ದೇವರಿಲ್ಲದೆ, ಈ ಜಗತ್ತಿನಲ್ಲಿ ಯಾವುದೇ ನಿರೀಕ್ಷೆ ಇಲ್ಲ. ಆದರೆ ನಾವು ದೇವರ ಬಳಿಗೆ ಮರಳಬಹುದು ಹಾಗೂ ಪುನಃ ನೀರಿಕ್ಷೆಯನ್ನು ಕಾಣಬಹುದು. ನಮ್ಮ ನಿರೀಕ್ಷೆಯಾಗಿ ನಮ್ಮನ್ನು ಆತನೊಂದಿಗೆ ತುಂಬಿಕೊಳ್ಳಲೂ ನಮ್ಮನ್ನು ನಿರೀಕ್ಷೆಯ ಹಾದಿಯಲ್ಲಿ ಇಡಲೂ ದೇವರು ಮನುಷ್ಯನಿಗೆ ಎಲ್ಲವೂ ಆಗಿರಬೇಕೆಂದು ಬಯಸುತ್ತಾನೆ.

ನಮ್ಮ ಜೀವನದಲ್ಲಿ ನಿರೀಕ್ಷೆಯನ್ನು ಕಾಣುವ 4 ವಿಧಾನಗಳು ಇಲ್ಲಿವೆ:

  1. ಅಂತರಂಗದ ಬರಿದಾಗಿರುವ ಆಳವಾದ ಪ್ರಜ್ಞೆಯನ್ನು ನಾವು ಅಂಗೀಕರಿಸಬೇಕು ಮತ್ತು ಸ್ವೀಕರಿಸಬೇಕು. ನೀವು ದೇವರನ್ನು ಕಳೆದುಕೊಂಡಿದ್ದೀರಿ ಎಂದು ಈ ಪ್ರಜ್ಞೆಯು ನಿಮಗೆ ಹೇಳುತ್ತಿದೆ. ನಿಮ್ಮ ಜೀವದ ನಿರೀಕ್ಷೆಯಾಗಿರಲು ನಿಮಗೆ ದೇವರು ಬೇಕು. ಸತ್ಯವೇದದಲ್ಲಿ, ಸೊಲೊಮೋನ ಎಂಬ ಒಬ್ಬ ಮಹಾನ್ ರಾಜನಿದ್ದನು, ಅವನು ಜಗತ್ತು ನೀಡುವ ಎಲ್ಲವನ್ನೂ ಹುಡುಕಿದನು ಮತ್ತು ಅನುಭವಿಸಿದನು. ಇದು ಎಲ್ಲಾ ವ್ಯರ್ಥವೇ ವ್ಯರ್ಥ, ಗಾಳಿಯನ್ನು ಬೆನ್ನಟ್ಟುವುದು ಮತ್ತು ಸೂರ್ಯನ ಕೆಳಗೆ ಹೊಸದೇನೂ ಇಲ್ಲ ಎಂದು ಅವನು ತೀರ್ಮಾನಿಸಿದನು. ಆದರೆ ದೇವರು ಮನುಷ್ಯನ ಹೃದಯದಲ್ಲಿ “ನಿತ್ಯತ್ವ” ಎಂದು ಕರೆಯಲ್ಪಡುವ ಏನೋ ಒಂದು ಇರಿಸಿದ್ದಾನೆ ಎಂದು ಕೂಡ ಹೇಳಿದನು. ನಿತ್ಯತ್ವವು ದೇವರಿಗಾಗಿ ಆಳವಾದ ಹುಡುಕಾಟವಾಗಿದ್ದು ಅದನ್ನು ಈ ಜಗತ್ತಿನ ಯಾವುದೂ ತುಂಬಲು ಅಸಾಧ್ಯ-ಕೇವಲ ದೇವರು ಆಂತರಿಕ ಬರಿದಾಗಿರುವ ಪ್ರಜ್ಞೆಯನ್ನು ತುಂಬಲೂ ತೃಪ್ತಿಪಡಿಸಲೂ ಸಾಧ್ಯ.
  1. ದೇವರು ನಮಗೆ ಎಲ್ಲವೂ ಆಗಿರಬಹುದು ಎಂಬುದನ್ನು ನಾವು ಗುರುತಿಸಬೇಕು. ನಾವು ಆತನನ್ನು ಅಭಿವ್ಯಕ್ತಪಡಿಸಿ ಪ್ರತಿನಿಧಿಸುವಂತೆ ದೇವರು ತನ್ನ ಸ್ವರೂಪದಲ್ಲಿಯೂ ಆತನ ಹೋಲಿಕೆಗೆ ಅನುಗುಣವಾಗಿಯೂ ನಮ್ಮನ್ನು ಸೃಷ್ಟಿಸಿದನು. ನಾವು ಕೈಗವಸಿನಂತೆ ಆಗಿದ್ದು, ಕೈ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ, ಆದರೆ ಕೈ ಇಲ್ಲದೆ ನಾವು ನಿಷ್ಪ್ರಯೋಜಕ ಮತ್ತು ಬರಿದಾಗಿದ್ದೇವೆ. ನಾವು ಕೈಯಂತೆ ದೇವರಿಂದ ತುಂಬಲ್ಪಟ್ಟಾಗ, ನಮ್ಮ ಉದ್ದೇಶವು ನೆರವೆರಲ್ಪಡುತ್ತದೆ. ಆದ್ದರಿಂದ, ನಮ್ಮನ್ನು ಸೃಷ್ಟಿಸುವಲ್ಲಿ ದೇವರ ಉದ್ದೇಶವನ್ನು ಪೂರೈಸಲು ಸಾಧ್ಯವಾಗುವಂತೆ ದೇವರನ್ನು ನಮ್ಮ ಜೀವವಾಗಿ ಸ್ವೀಕರಿಸಬೇಕು. ಕೇವಲ ದೇವರು ಮಾತ್ರ ನಮ್ಮ ಎಲ್ಲಾ ಶೂನ್ಯತೆಯನ್ನು ತುಂಬಬಲ್ಲನು ಮತ್ತು ನಮಗೆ ಎಲ್ಲವೂ ಆಗಬಲ್ಲನು.
  1. ನಾವು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಬೇಕು. ಈ ಪ್ರಪಂಚದ ಕುರಿತು ಮತ್ತು ನಾವು ಇರಿಸುವಂಥ ನಮ್ಮ ನಿರೀಕ್ಷೆಯ ಕುರಿತು ನಮ್ಮ ಆಲೋಚನೆಗಳಲ್ಲಿ ಬದಲಾವಣೆಯನ್ನು ಹೊಂದಿರಬೇಕು. ಸರ್ಕಾರದಲ್ಲಿನ ನಾಯಕತ್ವದಲ್ಲಿನ ವಿಶ್ವ ಪರಿಸ್ಥಿತಿಯಲ್ಲಿನ ಯಾವುದೇ ಬದಲಾವಣೆಯು ನಮಗೆ ನಿರಂತರ ನಿರೀಕ್ಷೆಯನ್ನು ತರಲಾಗದು. ನಾವು ಯಾವಾಗಲೂ ನಿರಾಶೆಗೊಳ್ಳುತ್ತೇವೆ. ಯಾವುದೇ ಮಾನವ ಸಾಧನೆಯಾಗಲಿ ಇಲ್ಲವೆ ಪ್ರಯತ್ನವಾಗಲಿ ಅದರೊಳಗಿನ ಬರಿದಾಗಿರುವಿಕೆಯನ್ನು ತುಂಬಲು ಸಾಧ್ಯವಿಲ್ಲ. ನಾವು ಪ್ರಯತ್ನಪಡುವುದರಿಂದ ಪಶ್ಚಾತ್ತಾಪಪಟ್ಟು ಹಿಂದಿರುಗಿ ದೇವರನ್ನು ಸ್ವೀಕರಿಸಬೇಕು.
  1. ನಾವು ಯೇಸು ಕ್ರಿಸ್ತನನ್ನು ನಮ್ಮ ರಕ್ಷಕನಾಗಿಯೂ ನಿರೀಕ್ಷೆಯಾಗಿಯೂ ಸ್ವೀಕರಿಸಬೇಕು. ನಾವು ಯೇಸುವನ್ನು ಹೊಂದಿದ್ದರೆ, ನಮಗೆ ನಿರೀಕ್ಷೆಯಿರುವುದು ಮತ್ತು ನಮ್ಮ ಜೀವನವು ನಿರೀಕ್ಷೆಯಿಂದ ತುಂಬಿರುತ್ತದೆ. ದೇವರು ತನ್ನ ಮಹಿಮೆಯ ಐಶ್ವರ್ಯವನ್ನು ನಮ್ಮ ಮಹಿಮೆಯ ನಿರೀಕ್ಷೆಯಾಗಿ ನಮ್ಮಲ್ಲಿ ಕ್ರಿಸ್ತನ ಮೂಲಕ ತಿಳಿಯಪಡಿಸಲು ಬಯಸುತ್ತಾನೆ. ನಮ್ಮ ನಿರೀಕ್ಷೆಯು ಒಂದು ಗಮ್ಯಸ್ಥಾನವನ್ನು ಹೊಂದಿದೆ ಮತ್ತು ಆ ಗಮ್ಯಸ್ಥಾನವು ನಿತ್ಯತ್ವಕ್ಕಾಗಿ ದೇವರ ಮಹಿಮೆಯಲ್ಲಿ ಜೀವಿಸುವ ಮಹಿಮೆಯಾಗಿದೆ. ಕೊಲೊಸ್ಸೆಯವರಿಗೆ 1:27, “ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ದೇವರು ತನ್ನ ಜನರಿಗೆ ತಿಳಿಸಲಿಕ್ಕೆ ಮನಸ್ಸುಮಾಡಿಕೊಂಡನು. ಈ ಮರ್ಮವು ಏನಂದರೆ ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವದೇ, ಎಂದು ಹೇಳುತ್ತದೆ.” ನಮ್ಮ ವ್ಯಕ್ತಿತ್ವವನ್ನು ತೆರೆದು ಆತನನ್ನು ಈ ಕೆಳಗಿನಂತೆ ಪ್ರಾರ್ಥಿಸುವ ಮೂಲಕ ನಾವು ಯೇಸುವನ್ನು ಸ್ವೀಕರಿಸಬಹುದು:

"ಕರ್ತನಾದ ಯೇಸು, ನಾನು ಬರಿದಾಗಿದ್ದು ನಿರೀಕ್ಷೆಯನ್ನು ಹುಡುಕುತ್ತಿದ್ದೇನೆಂದು ಅರಿಕೆಮಾಡುತ್ತೇನೆ. ನಿನ್ನನ್ನು ಹೊರತುಪಡಿಸಿ, ಏನೂ ಮತ್ತು ಯಾರೂ ನನ್ನ ನಿರೀಕ್ಷೆಯಾಗಲು ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವ ಮತ್ತು ನಿರೀಕ್ಷೆಯಾಗಿರಬೇಕೆಂದು ನಾನು ನಿನ್ನನ್ನು ಕೇಳುತ್ತೇನೆ. ಬರಿದಾಗಿರುವಿಕೆ, ಕೊಳೆಯುವಿಕೆ ಮತ್ತು ಮರಣದಿಂದ ನನ್ನನ್ನು ರಕ್ಷಿಸಬೇಕೆಂದು ನಾನು ನಿನ್ನನ್ನು ಕೇಳುತ್ತೇನೆ. ಕರ್ತನಾದ ಯೇಸುವೇ, ನನ್ನ ರಕ್ಷಕನಾಗಿಯೂ ನಿರೀಕ್ಷೆಯಾಗಿಯೂ ನಿನ್ನನ್ನು ಸ್ವೀಕರಿಸಲು ನಾನು ತೆರೆದುಕೊಂಡಿದ್ದೇನೆ. ನನ್ನ ಮಹಿಮೆಯ ನಿರೀಕ್ಷೆಯಾಗಿ ನನಗೆ ನಿನ್ನ ಅಗತ್ಯವಿದೆ."

ನಾವು ಕ್ರಿಸ್ತನನ್ನು ನಮ್ಮ ನಿರೀಕ್ಷೆಯಾಗಿ ಸ್ವೀಕರಿಸಿದ ಬಳಿಕ, ಆತನನ್ನು ಪ್ರೀತಿಸಿ, ನಮ್ಮಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟು ದೇವರ ಮಹಿಮೆಯಲ್ಲಿ ನಮ್ಮನ್ನು ಸಂಪೂರ್ಣವಾಗಿ ತರಲು ಆತನನ್ನು ಅನುಮತಿಸುವ ಮೂಲಕ ನಮ್ಮ ನಿರೀಕ್ಷೆಯಾಗಿರುವ ಈ ವ್ಯಕ್ತಿಯನ್ನು ನಾವು ಸಕ್ರಿಯರಾಗಿ ಆನಂದಿಸಬೇಕು.

“ಕ್ರಿಸ್ತನು ನಮ್ಮಲ್ಲಿ ಜೀವವಾಗಿ ವಾಸಿಸುವುದು ಇಂದು ನಾವು ದೇವರ ಸರ್ವಸಂಪೂರ್ಣತೆಯನ್ನು ಆಸ್ವಾದಿಸಿ ಮಾಡುವುದಲ್ಲದೆ, ಭವಿಷ್ಯದಲ್ಲಿ ನಾವು ದೇವರ ಮಹಿಮೆಯನ್ನು ಪ್ರವೇಶಿಸುವಂತೆ ಮಾಡಲು ಕೂಡ ಸಾಧ್ಯವಾಗುವುದು (ರೊಮಾ. 8:17; ಇಬ್ರಿ. 2:10). ಹೀಗೆ, ನಮ್ಮಲ್ಲಿ ಆತನು ಇಂದು ವಾಸಿಸುತ್ತಾ ನಮ್ಮ ಜೀವವಾಗಿಯೂ ಇನ್ನೊಂದೆಡೆ ಮುಂದೆ ನಮ್ಮ ಮಹಿಮೆಯ ನಿರೀಕ್ಷೆಯಾಗಿಯೂ ಆಗಿದ್ದಾನೆ (ಕೊಲೊ. 3:4; 1:27). ಇಂದು ನಮ್ಮಲ್ಲಿ ನಮ್ಮ ಜೀವವಾಗಿ ಆತನ ಜೀವಿಸುವಿಕೆಯು ಅಂದರೆ, ಆತನಲ್ಲಿ ದೇವರು ಜೀವವಾ ಗಿರುವಿಕೆಯು, ನಾವು ಬೆಳೆದು ದೇವರಂತಾಗಲು ಕಾರಣವಾಗಿ, ದೇವರ ಸ್ವರೂಪದಲ್ಲಿ ಖಚಿತವಾಗಿ ಬೆಳೆದು, ಕೊನೆಗೆ ದೇವರ ಮಹಿಮೆಗೆ ಬೆಳೆಯಲು ಸಹಾಯಮಾಡುತ್ತದೆ.”
ಜೀವ ತಿಳಿವು, ಅಧ್ಯಾಯ 4

ಜೀವ ತಿಳಿವು ಎಂಬ ಪುಸ್ತಕದಲ್ಲಿ ನೀವು ಹೆಚ್ಚು ಓದಬಹುದು. ಇದು ನಮ್ಮ ಉಚಿತ ಕ್ರಿಶ್ಚಿಯನ್ ಪುಸ್ತಕ ಮಾಲಿಕೆಯಲ್ಲಿ ಲಭ್ಯವಿದೆ.

*ಎಲ್ಲಾ ಉಲ್ಲೇಖಗಳು © ಲಿವಿಂಗ್ ಸ್ಟ್ರೀಮ್ ಮಿನಿಸ್ಟ್ರಿಯಿಂದ ಆಗಿವೆ. ವಚನಗಳನ್ನು BSI ಸತ್ಯವೇದದಿಂದ ತೆಗೆದುಕೊಳ್ಳಲಾಗಿದೆ.


ಇತರರೊಂದಿಗೆ ಹಂಚಿಕೊಳ್ಳಿ